Home
ಮಳವಳ್ಳಿ ಪಟ್ಟಣದ ಅಂತರ್ಜಾಲದ ತಾಣಕ್ಕೆ ಸುಸ್ವಾಗತ

ಮಳವಳ್ಳಿ ಪುರಸಭೆಯು 1930ರಲ್ಲಿ ಸ್ಥಾಪನೆಯಾಯಿತು, ಮಳವಳ್ಳಿ ಪುರಸಭೆಯು ಬೆಂಗಳೂರಿನಿಂದ 109 ಕಿ.ಮೀ ದೂರದಲ್ಲಿದ್ದು, ಮಳವಳ್ಳಿಯಿಂದ ಸುಮಾರು 25 ಕಿಲೋಮೀಟರ್ ಅಂತರದಲ್ಲಿ ಹೆಸರುವಾಸಿಯಾದ ಬ್ಲಫ್ ಮತ್ತು ಶಿಂಷಾ ನದಿ ಇರುತ್ತದೆ. 2011ರ ಜನಗಣತಿಯ ಪ್ರಕಾರ ಮಳವಳ್ಳಿ ಪುರಸಭೆ ವ್ಯಾಪ್ತಿಯಲ್ಲಿ 37527 ಜನಸಂಖ್ಯೆಯನ್ನು ಹೊಂದಿರುತ್ತದೆ. ಮಳವಳ್ಳಿ ಪುರಸಭೆ ವ್ಯಾಪ್ತಿಯಲ್ಲಿ ಒಟ್ಟು 23 ವಾರ್ಡ್ ಗಳಿದ್ದು 23 ಚುನಾಯಿತ ಸದಸ್ಯರು. ಮಳವಳ್ಳಿ ಪುರಸಭೆ ವ್ಯಾಪ್ತಿಯಲ್ಲಿ ಒಟ್ಟು 3.62 ಚ.ಕಿ.ಮೀ ಗಳಿರುತ್ತದೆ. ಬ್ರಿಟಿಷರು ಮೈಸೂರಿಗೆ ಮುತ್ತಿಗೆ ಹಾಕಿದ ಸಂದರ್ಭದಲ್ಲಿ ಮೈಸೂರು ಟಿಪ್ಪು ಸುಲ್ತಾನರು ಮತ್ತು ಅವರ ಸೈನ್ಯ ಸಮೇತ ಮಳವಳ್ಳಿಯಲ್ಲಿ ಬೀಡು ಬಿಟ್ಟಿದ್ದ ಇತಿಹಾಸವಿದೆ. ಹಾಗೂ ಮಳವಳ್ಳಿ ಮಾರ್ಗವಾಗಿ ಶ್ರೀರಂಗಪಟ್ಟಣಕ್ಕೆ ಬಂದಿ ಹೋಗುತ್ತಿದ್ದ ಇತಿಹಾಸವಿದೆ. ಮಳವಳ್ಳಿಯ ತುಂಬಾ ಪ್ರಸಿದ್ದವಾದ ಪುರಾತನ ಕಾಲದ ಮಾರೇಹಳ್ಳಿ ಶ್ರೀ ಶ್ರೀ ಲಕ್ಷ್ಮಿನರಸಿಂಹ ಸ್ವಾಮಿ ದೇವಸ್ಥಾನವಿದ್ದು. ವರ್ಷಕ್ಕೊಮ್ಮೆ ಮೇ ಅಥವಾ ಜೂನ್ ತಿಂಗಳಲ್ಲಿ ನಡೆಯುವ ಅದ್ದೂರಿ ಜಾತ್ರೆ ಮತ್ತು ರಥೋತ್ಸವ ಸಮಯದಲ್ಲಿ ಈ ದೇವರನ್ನು ನೋಡಲು ಜನಸಾಗರವೇ ಹರಿದುಬರುತ್ತದೆ. ಹಾಗೂ ಹತ್ತಿರದಲ್ಲಿ ಶಿವನಸಮುದ್ರ ಮತ್ತು ಬ್ಲಫ್ ಎರಡು ಜಲಪಾತಗಳಿದ್ದು, ಗಗನಚುಕ್ಕಿ ಮತ್ತು ಭರಚುಕ್ಕಿ ಎಂಬ ಹೆಸರಿನಿಂದ ಪ್ರಸಿದ್ದಿ ಹೊಂದಿದ್ದು, ಹಾಗೂ ಪ್ರತಿ ವರ್ಷ ಜಲಪಾತೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಮಾಡುತ್ತಾರೆ. ಈ ಜಲಪಾತ ಏಷ್ಯಾ ಖಂಡದಲ್ಲೇ ಮೊದಲನೇ ಬಾರಿಗೆ ಹೈಡ್ರೋ ಎಲೆಕ್ಟ್ರಾನಿಕ್ ಪವರ್ ಸ್ಟೇಷನ್ ಸ್ಥಾಪಿಸಿ ವಿದ್ಯುತ್ ಮಾಡಲಾಗುತ್ತಿದೆ ಎಂಬ ಹೆಸರಿಗೆ ಖ್ಯಾತಿ ಪಡೆದಿರುತ್ತದೆ.
The Malavalli Town constituted in 1930. It is situated along Mandya district Southern state of Karnataka, india a historical town at a distance of 31 Kms from Mandya District which was partialy destroyed by Tippu himself 1799 common Era sultan was forced to take back his troops from Malavalli when Mysore state was attacked by british army and also common Era Sri Sri Lakshmi Narasimhaswamy temple came into existance at marehalli a femous temple at Malavalli town. And also the Shivanasamudra and Bluff fallls formed on the cauvery river splits into two forming and island. The two Strems falls down to the same point and flows the two falls are called 1)Gaganachukki (90 meters) 2)Bharachukki(69Kms), on the down side of place there is a Hydral power generation station belonging to karanataka state this hydral power plant is the first in asia.

ಸಮಾಚಾರಗಳು | In the News:
ಸಾರ್ವಜನಿಕ ಕುಂದು ಕೊರತೆ ಸಹಾಯವಾಣಿ ಸಂಖ್ಯೆ: 08231-244909
ಕರ್ನಾಟಕ ನಾಗರೀಕ ಸೇವಾ ಖಾತರಿ ಅಧಿನಿಯಮ 2012
ನಗರ ಸ್ಥಳೀಯ ಸಂಸ್ಥಗಳ ಧೈಯೋದ್ಧೇಶಗಳು
ಇಂದು ನಗರ ಜೀವನ ವ್ಯವಸ್ಥೆಯು ಸಮರ್ಪಕವಾಗಿರಲು ಸರ್ಕಾರವು ಹತ್ತು ಹಲವು ಯೋಜನೆಗಳನ್ನು ರೂಪಿಸಿತ್ತಿದೆ. ಈಗ ಪುರಸಭೆಯ ಮುಖಾಂತರ ಈ ಕೆಳಕಂಡ ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಒಗ್ಗೂಡಿದಾಗ ನಗರ ನಿರ್ವಹಣೆ ಕಷ್ಟವಾದುದೇನಲ್ಲ. ಇವರೆಲ್ಲರಲ್ಲಿ ಆಡಳಿತ ನಿರ್ವಹಣಾ ಕೌಶಲ್ಯಗಳು ವೃದ್ಧಿಗೊಳ್ಳಬೇಕು.ಮಾಹಿತಿ ತಂತ್ರಜ್ಞಾನದ ಮೂಲಕ ಆಡಳಿತ ಮತ್ತು ಅಭಿವೃದ್ದಿ ಕಾರ್ಯಕ್ರಮಗಳು ಸುಲಲಿತವಾಗಿ ಅನುಷ್ಠಾನಗೊಳ್ಳಬೇಕು. ಹಣಕಾಸು ನಿರ್ವಹಣೆಯಲ್ಲಿ ಮತ್ತು ಇತರೆ ಕಾರ್ಯ ನಿರ್ವಹಣೆಯಲ್ಲಿ ಪಾರದರ್ಶಕತೆ ಇರಬೇಕು.
ನಮ್ಮ ಸ್ಥಳೀಯ ಸಂಸ್ಥೆಯ ಮುಖ್ಯ ಧೈಯೋದ್ದೇಶಗಳು ಕೆಳಕಂಡಂತಿವೆ:
ಪಟ್ಟಣ, ನಗರಗಳ ಅಭಿವೃದ್ದಿಗೆ ಯೋಜನೆಗಳನ್ನು ರೂಪಿಸಿವುದು.
ಭೂಮಿಯ ಉಪಯೋಗವನ್ನು ನಿಯಂತ್ರಿಸುವುದು.
ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ದಿಗಾಗಿ ಯೋಜನೆಗಳನ್ನು ರೂಪಿಸಿವುದು.
ರಸ್ತೆಗಳು ಮತ್ತು ಸೇತುವೆಗಳನ್ನು ನಿರ್ಮಿಸುವುದು.
ಮನೆ ಬಳಕೆ, ಕೈಗಾರಿಕೆ ಹಾಗೂ ವಾಣಿಜ್ಯ ಉದ್ದೇಶಗಳೆಗೆ ನೀರು ಸರಬರಾಜು ಮಾಡುವುದು.
ಜನರ ಆರೋಗ್ಯ, ನೈರ್ಮಲ್ಯ ಕಾಪಾಡುವುದು.
ಸಮಾಜದ ದುರ್ಬಲ ವರ್ಗಗಳ ಅಭಿವೃದ್ದಿಗೆ ಕ್ರಮ ಕೈಗೊಳ್ಳುವುದು.
ತ್ಯಾಜ್ಯ ವಸ್ತುಗಳ ಸಂಗ್ರಹಣೆ ಮತ್ತು ವಿಲೇವಾರಿ.
ಕೊಳಚೆ ಪ್ರದೇಶಗಳ ಅಭಿವೃದ್ದಿ ಹಾಗೂ ನಗರದ ಬಡತನ ನಿವಾರಣೆ.
ಇವುಗಳು ನಮ್ಮ ಸ್ಥಳೀಯ ಸಂಸ್ಥೆಯ ಮುಖ್ಯ ಧೈಯೋದ್ದೇಶಗಳಾಗಿದ್ದು ಸ್ಥಳೀಯ ಸಂಸ್ಥೆಯು ಸಾರ್ವಜನಿಕ ಸೌಲಭ್ಯ ರಚನೆ ಮತ್ತು ನಿರ್ವಹಣೆಯಲ್ಲಿ ಸದಾ ತೊಡಗಿರುತ್ತದೆ.
ಗಣಕೀರಣ
ಪುರಸಭೆಯಲ್ಲಿ 1989 ರಿಂದ ಇಲ್ಲಿಯ ತನಕ ಜನನ ಮತ್ತು ಮರಣ ದಾಖಲೆಗಳನ್ನು ಗಣಕೀಕೃತಗೊಳಿಸಿ ಈ ಸೇವೆಯನ್ನು ದಿ:24.10.2008 ರಿಂದ ಜಾರಿಗೆ ತಂದು ಜನನ ಮರಣ ಪತ್ರಗಳನ್ನು ಧೃಡಿಕರಿಸಿ ವಿತರಿಸಲಾಗುತ್ತಿದೆ. ಹಾಗು ದಿ:01.05.2009 24ಘಂಟೆ ಕಾರ್ಯ ನಿರ್ವಹಿಸುವ ಸಾರ್ವಜನಿಕ ಕುಂದುಕೊರತೆ ನಿವಾರಣಾ ಘಟಕವನ್ನು ತೆರೆಯಲಾಗಿದ್ದು ದೂರುಗಳನ್ನು ದಾಖಲಿಸಲು ಸಹಾಯವಾಣಿ ಸಂ:08231-244909 ದೂರವಾಣಿಯನ್ನು ಅಳವಡಿಸಲಾಗಿ ನಾಗರೀಕರುಗಳು ಆನ್ ಲೈನ್ ಮೂಲಕ, ದೂರವಾಣಿ ಮೂಲಕ ಹಾಗೂ ಖುದ್ದಾಗಿ ದೂರುಗಳನ್ನು ದಾಖಲಿಸಲು ವ್ಯವಸ್ಥೆ ಮಾಡಲಾಗಿದೆ.
Computerization
we are happy to intimate the citizens of Malavalli town that we have computerized the Birth & Death Records registered with us from the Year 1989 to on date under KARNATAKA MINICIPAL REFORMS PROJECT (KMRP). Now the Citizens are requested to visit the Citizen Service Centre to Registrar the BIRTH/DEATh records and get of BIRTH/DEATH certificates by paying Nominal Service fee of Rs 15/- with the first Copy served as free of Cost.
"PUBLIC GRIEVENCE READDRESSAL CELL" -PGR has been opened to address and Solve the Complaints of publics within the stipulated time. Any Citizen in person or Online or through Phone Call can register their Complaints at Our PGR CELL around the clock (24 Hours/365 days). Contact No. of PGR is 08231-244909
This page Maintained by : Chief Officer Modified Date : 18.04.2013

